Neene Bari Neede

Wednesday, August 14, 2013

Baa Nodu Gelathi..ಬಾ ನೋಡು ಗೆಳತಿ ನವಿಲು ಗರಿಯು..

ಹಾಡು   : ಬಾ ನೋಡು ಗೆಳತಿ..
ಗೀತಕಾರ : ಜಯಂತ ಕಾಯ್ಕಿಣಿ.
ಇಡುವಡಿ  : ನೀನೆ ಬರಿ ನೀನೆ...
ಸಂಗೀತ  : ಮನೋ ಮೂರ್ತಿ.



     
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಕಣ್ಣಾ ಮುಚ್ಚಾಲೆ ಆಡುತಾ ಅಡಗಿ ನೀನೆಲ್ಲಿ ಹೋದೆಯಾ
ನಾ ಅರಸುತಿರುವೆನು ಇನ್ನು ನೀ ಕಾಣಲಾರೆಯಾ
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ...                                 !!೧!!

ನಾನು ನೀನು ಸೇರಿ ತಿಂದ ಬೊರೆ ಹಣ್ಣು ಎಲ್ಲಿದೆ
ಕದ್ದು ಹಂಚಿಕೊಂಡ ಸ್ವಾದ ಹಾಗೆ ಇನ್ನು ಇಲ್ಲಿದೆ
ಲಂಗದಲ್ಲಿ ಹೆಕ್ಕಿ ತಂದ ಪಾರಿಜಾತ ಚೆಲ್ಲಿದೆ
ಬಾ ಹೂಳೆಯ ತುಂಬಾ ಹನಿವ ಮಳೆಯಾ ಬೆಳೆ ಮೂಡಿದೆ  !!೨!!

ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಕಣ್ಣಾ ಮುಚ್ಚಾಲೆ ಆಡುತಾ ಅಡಗಿ ನೀನೆಲ್ಲಿ ಹೋದೆಯಾ
ನಾ ಅರಸುತಿರುವೆನು ಇನ್ನು ನೀ ಕಾಣಲಾರೆಯಾ
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ...

ನಾನು ನೀನು ಸೇರಿ ಕಂಡ ತೇರು ಅಲ್ಲೆ ನಿಂತಿದೆ
ಊರ ಜಾತ್ರೆಯಲ್ಲಿ ಈಗ ಬೆರೆ ವೇಷ ಬಂದಿದೆ
ನೀನು ಬೇಕು ಎಂದ ಹೂ ಜೆಬಿನಲ್ಲೆ ಕುಂತಿದೆ.
ಈ ಅಲೆವಾ ಮನಕೆ ನಿನ್ನ ನೆನಪು ಅತಿಯಾಗಿದೆ            !!೩!!

ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಕಣ್ಣಾ ಮುಚ್ಚಾಲೆ ಆಡುತಾ ಅಡಗಿ ನೀನೆಲ್ಲಿ ಹೋದೆಯಾ
ನಾ ಅರಸುತಿರುವೆನು ಇನ್ನು ನೀ ಕಾಣಲಾರೆಯಾ
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ...

Tuesday, August 13, 2013

baanali badalago.. bannave..ಬಾನಲಿ ಬದಲಾಗೋ...ಬಣ್ಣವೆ ಭಾವನೆ..!!

    

ಚಿತ್ರ       : ಸಿಂಪಲಾಗ್  ಒಂದ್ ಲವ್ ಸ್ಟೋರಿ . 
ಗೀತೆ ರಚನೆ : ಸಿದ್ದು ಕೋಡಿಪುರ. 
ಸಂಗಿತ     : ಭರತ್ ಬಿ ಜೆ.


ಬಾನಲಿ ಬದಲಾಗೋ ಬಣ್ಣವೆ ಭಾವನೆ.. 
ಹೃದಯವು ಹಗುರಾಗಿ ಹಾರುವ ಸೂಚನೆ..
ಮನದ ಹೂಬನದಿ ನೆನಪೇ ಹೂವಾಯ್ತು..
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ.. 
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೧!!

ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ  ಬಳಿ ಬಂದು ಸರಿ ಮಾಡದೆ..
ಗೆಳತಿ ನನ್ನ ಗೆಳತಿ ತೆರೆದೇ ಮನದ ಕಿಟಕಿ..
ಕರುಣಿಸು ಪ್ರೇಮ ಧಾರೆ ಬಯಕೆಯಾ ತೋರದೆ .. 
 ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ.. 
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೨!!

ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ 
ಅರಸಿ ಬೇಗಾ ಕರೆ ಮಾಡು ತಡ ಮಾಡದೆ..
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ..
ಗಮನಿಸು ಪ್ರೇಮ ಭಾಷೆ ಪದಗಳ ಣೊಡದೆ.. 
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ.. 
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೩!!

ಬಾನಲಿ ಬದಲಾಗೋ ಬಣ್ಣವೆ ಭಾವನೆ.. 
ಹೃದಯವು ಹಗುರಾಗೀ  ಹಾರುವ ಸೂಚನೆ..
ಮನದ ಹೂಬನದಿ ನೆನಪೇ ಹೂವಾಯ್ತು..
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ.. 
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೧!!








Monday, August 12, 2013

Neene Bari Neene Lyrics in kannada....



ಹಾಡು      : ನೀನೆ ಬರಿ ನೀನೆ..
ಗೀತಕಾರ : ಜಯಂತ ಕಾಯ್ಕಿಣಿ.
ಇಡುವಡಿ  : ನೀನೆ ಬರಿ ನೀನೆ...
ಸಂಗೀತ  : ಮನೋ ಮೂರ್ತಿ.

-------------------------------------------------------------------------
ಆಹಾ...ಆಹಾ..ಎಹೆ ಒಹೊ ಅಹಾ....

ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ
ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ
ನೀನೆ..ಬರಿ ನೀನೆ..ಎದೆಯಾಳದ ಅಲೆಯೆಲ್ಲಾ ನೀನೆ
ನೀನೆ..ಬರಿ ನೀನೆ..ಅನುರಾಗದ ಸ್ವರವೆಲ್ಲಾ ನೀನೆ
ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ..!!1!!

ಆಕಾಶದಲ್ಲಿಯ ಆ ಮೋಡಕೆ,ಆಕಾರ ನ್ತಿನ್ನದೆ ತಾ ಮೂಡಿದೆ
ಎಕಾಂತದಲ್ಲಿಯ ಈ ಭಿನ್ನಹ,ಸ್ವಿಕಾರ ಮಾಡೇಯಾ ತಡಮಾಡದೆ
ನೀನೆ ತೀರದ ಹಂಬಲ, ಭಾವದ ಬೆಂಬಲ
ತಂದಿಹೆ ವ್ಯಾಮೋಹದ ಮಿಡಿತ ನಿನಗಾಗಿಯೆ, ನಿನಗಾಗಿಯೇ...!!2!!

ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ
ನೀನೆ..ಬರಿ ನೀನೆ..ಎದೆಯಾಳದ ಅಲೆಯೆಲ್ಲಾ ನೀನೆ
ನೀನೆ..ಬರಿ ನೀನೆ..ಅನುರಾಗದ ಸ್ವರವೆಲ್ಲಾ ನೀನೆ
ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ..

ನಿನಗೆಂದೆ ಈ ಸಾಲು ಅಂಗಡಿಯಲಿ ಉಡುಗೊರೆಯಾ ಎನೆಂದು ನಾ ಆಯಲಿ
ನಾ ಬಡವ ಈ ನನ್ನ ಮನಸಲ್ಲಿರೋ ಸಡಗರದ ಸಿರಿ ಹೆಗೆ ನಾ ನೀಡಲಿ
ಬೇರೆ ಎನಿದೆ ಕಾಣಿಕೆ ಪ್ರೀತಿಗೆ ಹೋಲಿಕೆ
ಅರಳಿದೆ ಈ ಜಿವದ ಹೂವು ನಿನಗಾಗಿಯೆ..ನಿನಗಾಗಿಯೇ...!!3!!

ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ
ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ
ನೀನೆ..ಬರಿ ನೀನೆ..ಎದೆಯಾಳದ ಅಲೆಯೆಲ್ಲಾ ನೀನೆ
ನೀನೆ..ಬರಿ ನೀನೆ..ಅನುರಾಗದ ಸ್ವರವೆಲ್ಲಾ ನೀನೆ
ನೀನೆ..ಬರಿ ನೀನೆ..ಈ ಹಾಡಲ್ಲಿ ಪದವೆಲ್ಲಾ ನೀನೆ..!!!!