Neene Bari Neede

Wednesday, August 14, 2013

Baa Nodu Gelathi..ಬಾ ನೋಡು ಗೆಳತಿ ನವಿಲು ಗರಿಯು..

ಹಾಡು   : ಬಾ ನೋಡು ಗೆಳತಿ..
ಗೀತಕಾರ : ಜಯಂತ ಕಾಯ್ಕಿಣಿ.
ಇಡುವಡಿ  : ನೀನೆ ಬರಿ ನೀನೆ...
ಸಂಗೀತ  : ಮನೋ ಮೂರ್ತಿ.



     
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಕಣ್ಣಾ ಮುಚ್ಚಾಲೆ ಆಡುತಾ ಅಡಗಿ ನೀನೆಲ್ಲಿ ಹೋದೆಯಾ
ನಾ ಅರಸುತಿರುವೆನು ಇನ್ನು ನೀ ಕಾಣಲಾರೆಯಾ
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ...                                 !!೧!!

ನಾನು ನೀನು ಸೇರಿ ತಿಂದ ಬೊರೆ ಹಣ್ಣು ಎಲ್ಲಿದೆ
ಕದ್ದು ಹಂಚಿಕೊಂಡ ಸ್ವಾದ ಹಾಗೆ ಇನ್ನು ಇಲ್ಲಿದೆ
ಲಂಗದಲ್ಲಿ ಹೆಕ್ಕಿ ತಂದ ಪಾರಿಜಾತ ಚೆಲ್ಲಿದೆ
ಬಾ ಹೂಳೆಯ ತುಂಬಾ ಹನಿವ ಮಳೆಯಾ ಬೆಳೆ ಮೂಡಿದೆ  !!೨!!

ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಕಣ್ಣಾ ಮುಚ್ಚಾಲೆ ಆಡುತಾ ಅಡಗಿ ನೀನೆಲ್ಲಿ ಹೋದೆಯಾ
ನಾ ಅರಸುತಿರುವೆನು ಇನ್ನು ನೀ ಕಾಣಲಾರೆಯಾ
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ...

ನಾನು ನೀನು ಸೇರಿ ಕಂಡ ತೇರು ಅಲ್ಲೆ ನಿಂತಿದೆ
ಊರ ಜಾತ್ರೆಯಲ್ಲಿ ಈಗ ಬೆರೆ ವೇಷ ಬಂದಿದೆ
ನೀನು ಬೇಕು ಎಂದ ಹೂ ಜೆಬಿನಲ್ಲೆ ಕುಂತಿದೆ.
ಈ ಅಲೆವಾ ಮನಕೆ ನಿನ್ನ ನೆನಪು ಅತಿಯಾಗಿದೆ            !!೩!!

ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಕಣ್ಣಾ ಮುಚ್ಚಾಲೆ ಆಡುತಾ ಅಡಗಿ ನೀನೆಲ್ಲಿ ಹೋದೆಯಾ
ನಾ ಅರಸುತಿರುವೆನು ಇನ್ನು ನೀ ಕಾಣಲಾರೆಯಾ
ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ...

No comments:

Post a Comment