ಚಿತ್ರ : ಸಿಂಪಲಾಗ್ ಒಂದ್ ಲವ್ ಸ್ಟೋರಿ .
ಗೀತೆ ರಚನೆ : ಸಿದ್ದು ಕೋಡಿಪುರ.
ಸಂಗಿತ : ಭರತ್ ಬಿ ಜೆ.
ಬಾನಲಿ ಬದಲಾಗೋ ಬಣ್ಣವೆ ಭಾವನೆ..
ಹೃದಯವು ಹಗುರಾಗಿ ಹಾರುವ ಸೂಚನೆ..
ಮನದ ಹೂಬನದಿ ನೆನಪೇ ಹೂವಾಯ್ತು..
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ..
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೧!!
ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ ಬಳಿ ಬಂದು ಸರಿ ಮಾಡದೆ..
ಗೆಳತಿ ನನ್ನ ಗೆಳತಿ ತೆರೆದೇ ಮನದ ಕಿಟಕಿ..
ಕರುಣಿಸು ಪ್ರೇಮ ಧಾರೆ ಬಯಕೆಯಾ ತೋರದೆ ..
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ..
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೨!!
ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ
ಅರಸಿ ಬೇಗಾ ಕರೆ ಮಾಡು ತಡ ಮಾಡದೆ..
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ..
ಗಮನಿಸು ಪ್ರೇಮ ಭಾಷೆ ಪದಗಳ ಣೊಡದೆ..
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ..
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೩!!
ಬಾನಲಿ ಬದಲಾಗೋ ಬಣ್ಣವೆ ಭಾವನೆ..
ಹೃದಯವು ಹಗುರಾಗೀ ಹಾರುವ ಸೂಚನೆ..
ಮನದ ಹೂಬನದಿ ನೆನಪೇ ಹೂವಾಯ್ತು..
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ..
ಅದೇ ಗಾನ ನಗೆ ಭಾನಾ ಎದೆಯಲಿ ನಾಟಿದೆ..!!೧!!
No comments:
Post a Comment